ನಗರಸಭೆಯ ಕಾರ್ಯಗಳು:-

 

                        ಕರ್ನಾಟಕ ಪುರಸಭಾ ಅಧಿನಿಯಮ 1964 ರೀತ್ಯಾ ಸ್ಥಾಪಿತವಾಗಿದ್ದು ಪ್ರದೇಶದ ಜನಸಂಖ್ಯೆ ಸಾಂದ್ರತೆ ಬರುವ ಆದಾಯ ಶೇಕಡವಾರು ವ್ಯವಸಾಯೇತರ ಚಟುವಟಿಕೆಗಳಲ್ಲಿ ಕೆಲಸ ಮಾಡುವವರು ಆರ್ಥಿಕವಾಗಿ ಮುಖ್ಯವಾದ ಸ್ಥಳ ಮತ್ತು ಇತರೆ ಅಂಶಗಳನ್ನು ಗಣನೆಗೆ ತೆಗೆದು ಕೊಂಡು ಸರ್ಕಾರದ ನೋಟಿಫಿಕೇಷನ್ ಮೂಲಕ ಮುನಿಸಿಪಾಲಿಟಿ ಎಂದು ಘೋಷಿಸಿರುತ್ತಾರೆ. ಭಾರತ ಸಂವಿಧಾನದ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಯೇ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿಯನ್ನು ಪಡಿಸುವುದು ನಗರ ಸ್ಥಳೀಯ ಸಂಸ್ಥೆಯ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಯಾದಗಿರಿ ನಗರಸಭೆಯೂ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಬರುತ್ತಿದ್ದು ನಗರಾಭಿವೃದ್ಧಿ ಕಾರ್ಯದರ್ಶಿಗಳು/ಪೌರಾಡಳಿತ ನಿರ್ಧೇಶಕರು/ಜಿಲ್ಲಾಧಿಕಾರಿಗಳು/ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸಂಸ್ಥೆಯನ್ನು ನಿಯಂತ್ರಿಸುವ  ಮತ್ತು ಮಾರ್ಗದರ್ಶನ ಮಾಡುವ, ತಪಾಸಣೆ ಮಾಡುವ, ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಹೊಂದಿರುತ್ತಾರೆ.

 

           ಸರ್ಕಾರದಿಂದ ನೇಮಿಸಲ್ಪಟ್ಟ ಪೌರಾಯುಕ್ತರು ಸ್ಥಳೀಯ ಸಂಸ್ಥೆಯ ಎಲ್ಲಾ ಕಾರ್ಯಕ್ರಮ ಹಾಗೂ ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಾಗಿರುತ್ತಾರೆ. ಅವರ ಅಧೀನದಲ್ಲಿ ಆಡಳಿತ, ಕಂದಾಯ, ತಾಂತ್ರಿಕ ಮತ್ತು ನೈರ್ಮಲ್ಯ ಯೋಜನೆಗಳು ಮತ್ತು ಡೇ ನಲ್ಮ್ ಯೋಜನೆಗಳು ಕರ್ತವ್ಯ ನಿರ್ವಹಿಸುತ್ತಿರುತ್ತವೆ.

 

ಆರೋಗ್ಯ ಮತ್ತು ನೈರ್ಮಲ್ಯ

 ಬೀದಿ ಬದಿ ದೀಪ ಅಳವಡಿಕೆ

ಆಸ್ತಿ ತೆರಿಗೆ ವಸೂಲಾತಿ

ಮಳಿಗೆಗಳ ತೆರಿಗೆ ವಸೂಲಾತಿ

ಉದ್ದಿಮೆ ಪರವಾನಗಿ ಶುಲ್ಕ ವಸೂಲಾತಿ

ಕಟ್ಟಡ ಪರವಾನಗಿ ನೀಡುವುದು

ಮೂಲ : ನಗರಸಭೆ, ಕರ್ನಾಟಕ ಸರ್ಕಾರ.